ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರು ಎಲ್ಲೂ ಕೂಲಿ ಕೆಲಸಕ್ಕೆ ಹೋಗಬಾರದೆಂದು ಪಂಚಾಯಿತಿಗಳಲ್ಲಿ ತಾಕೀತು ಮಾಡಿದ್ದಾರೆ. ಇನ್ನು ಕೂಲಿ ಕೆಲಸವೇ ಇಲ್ಲದೆ ಜೀವನ ನಡೆಸುವುದು ಕಷ್ಟಕರ ಹೀಗಿರುವಾಗ ವಾರಕ್ಕೆ ಮತ್ತು ತಿಂಗಳಿಗೆ ಪಡೆದುಕೊಂಡಿರುವ ಮೈಕ್ರೋಫೈನಾನ್ಸ್ ಕಂಪನಿಗಳ ಸಾಲತೀರಿಸುವುದು ಹೇಗೆ ನಮಗೆ ಇನ್ನೂ ಮೂರು ತಿಂಗಳ ಕಾಲಾವಧಿ ನೀಡಿ ಅದು ಬಿಟ್ಟು ಜೂನ್ ತಿಂಗಳಿಂದ ಮರುಪಾವತಿಗೆ ಒತ್ತಾಯ ಮಾಡಿದರೆ ನಮಗೆ ಸಾವೇ ಗತಿ ಇದು ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದುಕೊಂಡಿರುವ ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ಬೀದಿ ಕೂಲಿ ಕಾರ್ಮಿಕ ಮಹಿಳಾ ಒಕ್ಕೂಟದ ಮಹಿಳೆಯರ ಅಭಿಪ್ರಾಯ.